  ಮೂಲದೊಡನೆ ಪರಿಶೀಲಿಸಿ

ಎಮರ್ಸನ್ ಸಾಮಥ್ರ್ಯಾಧಾರಿತ ಕೂಲಿ ಯೋಜನೆ

	ಕೆಲಸಗಾರರು ಹೆಚ್ಚು ಉತ್ಪಾದಿಸುವಂತೆ ಉತ್ತೇಜಿಸುವ ಉದ್ದೇಶದಿಂದ, ಕಾಲ ಮತ್ತು ಚಲನೆಗಳ ಅಧ್ಯಯನದ ವಿಶ್ಲೇಷಣೆಯ ಆಧಾರದ ಮೇಲೆ, ರೂಪಿತವಾದ ಕೂಲಿ ಯೋಜನೆಗಳಲ್ಲೊಂದು (ಎಮರ್ಸನ್ ಎಫಿಷಿಯೆನ್ಸಿ ಪ್ಲಾನ್). ಕೈಗಾರಿಕೆಯ ವೈe್ಞÁನಿಕ ವ್ಯವಸ್ಥಾಪನೆಯಲ್ಲಿ ಕೆಲಸಗಾರರ ಉತ್ಪಾದನ ಸಾಮಥ್ರ್ಯವನ್ನು ಕುರಿತು ಶಾಸ್ತ್ರೀಯವಾದ ಅಧ್ಯಯನ ನಡೆಸಿರುವ ಟೇಲರನ (1856-1915) ಸಹಚರಲ್ಲೊಬ್ಬನಾಗಿದ್ದ ಹ್ಯಾರಿಂಗ್‍ಟನ್ ಎಮರ್ಸನ್ ಇದನ್ನು ರಚಿಸಿದ್ದರಿಂದ ಇದಕ್ಕೆ ಆತನ ಹೆಸರೇ ಬಂದಿದೆ. 	

	ಸಾಮಾನ್ಯವಾಗಿ ಕೆಲಸಗಾರರ ಅತ್ಯುಚ್ಚಸಾಮಥ್ರ್ಯದ 66 2/3% ರಷ್ಟು ಮಾತ್ರ ಉತ್ಪಾದನೆಯಲ್ಲಿ ವಿನಿಯೋಗವಾಗುತ್ತಿದ್ದುದನ್ನು ಈತ ಕಂಡುಹಿಡಿದಿದ್ದಾನೆ. ಸಾಮಾನ್ಯವಾಗಿ ಕಂಡುಬರುವ ಈ ಮಟ್ಟದಿಂದ ಅದನ್ನು ಶೇಕಡಾ 100ಕ್ಕೂ ಅನಂತರ ಇನ್ನು ಮಿಗಿಲಾಗಿಯೂ ಹೆಚ್ಚುವಂತೆ ಉತ್ತೇಜನ ನೀಡುವುದು ಈತನ ಕೂಲಿ ಯೋಜನೆಯ ಗುರಿ. 

	ಈ ಯೋಜನೆಯನ್ನು ಅಳವಡಿಸಲು ಮೊದಲಿಗೆ ಕೆಲವು ಸಿದ್ಧತೆ ಮಾಡಿಕೊಳ್ಳಬೇಕು. ವೈe್ಞÁನಿಕವಾಗಿ ಕಾಲ ಮತ್ತು ಚಲನೆಗಳ ಅಧ್ಯಯನ ನಡೆಸಿ, ಸಮಯಕ್ಕೆ ಸೂಕ್ತವಾದ ಕಾರ್ಯದ (ಟಾಸ್ಕ್) ಅಥವಾ ಕಾರ್ಯಕ್ಕೆ ಸೂಕ್ತವಾದ ಸಮಯದ ಪ್ರಮಾಣಿತ ಮಟ್ಟವನ್ನು ನಿಗದಿಗೊಳಿಸಬೇಕು. ಶೇಕಡಾ 66 2/3. ಮೀರಿದ ಸಾಮಥ್ರ್ಯಕ್ಕೆ ಕೊಡಲಾರಂಭವಾಗುವ ಉಚಿತಾರ್ಥದ ಕೋಷ್ಟಕವನ್ನು ಸಿದ್ಧಪಡಿಸಿಕೊಳ್ಳಬೇಕು. 

	ನಿಗದಿಗೊಳಿಸಿದ ಪ್ರಮಾಣಿತಮಟ್ಟದ ಅವಧಿಯಲ್ಲಿ ಕಾರ್ಯನಿರ್ವಹಿಸುವ ಕೆಲಸಗಾರರು ಶೇಕಡಾ 100 ರ ಸಾಮಥ್ರ್ಯ ತೋರಿದ್ದಾರೆಂದು ತಿಳಿಯಬೇಕು. ನಿಗದಿಗೊಳಿಸಿದ ಅವಧಿಗಿಂತ ಹೆಚ್ಚುಕಾಲ ತೆಗೆದುಕೊಂಡಂತೆಲ್ಲ ಅವನ ಸಾಮಥ್ರ್ಯ ಕಡಿಮೆ. ನಿಗದಿಗೊಳಿಸಿದ ಸಮಯಕ್ಕೆ ಮುಂಚೆಯೇ ಕಾರ್ಯನಿರ್ವಹಿಸಿದರೆ ಅವನು ಶೇಕಡಾ 100 ಕ್ಕಿಂತ ಹೆಚ್ಚು ಸಾಮಥ್ರ್ಯ ತೋರಿದ್ದಾನೆಂದು ಅರ್ಥ. 

	ಎಮರ್ಸನ್ ಸಾಮಥ್ರ್ಯಾಧಾರಿತ ಕೂಲಿಯೋಜನೆಯ ಲಕ್ಷಣಗಳನ್ನು ಈ ಕೆಳಗಿನಂತೆ ನಿರೂಪಿಸಬಹುದು. 

	1. ಪ್ರತಿಕೆಲಸಗಾರನಿಗೂ ಕೆಲಸದ ವೇಳೆಯ ಕೂಲಿ (ಟೈಂ ವೇಜ್) ದೊರಕುವ ಭರವಸೆಯಿದೆ. 

	2. ವೈe್ಞÁನಿಕವಾಗಿ ಕಾಲ ಮತ್ತು ಚಲನೆಗಳ ಅಧ್ಯಯನ ನಡೆಸಿ ಪ್ರಮಾಣ ನಿಷ್ಕರ್ಷೆ ಮಾಡಲಾಗಿರುತ್ತದೆ. ಈ ಯೋಜನೆಗೆ ಕಾರ್ಯ ಮತ್ತು ಯಂತ್ರೋಪಕರಣಗಳ ಪ್ರಮಾಣೀಕರಣ ಅವಶ್ಯ. 

	3. ಪ್ರಮಾಣೀಕರಣ ಮಟ್ಟದ ಶೇಕಡಾ 66 2/3. ರ ಸಾಮಥ್ರ್ಯದವರೆಗೆ ಕೇವಲ ವೇಳಾ ಕೂಲಿ ಕೊಡಲಾಗುತ್ತದೆ. ಈ ಮಟ್ಟಕ್ಕಿಂತ ಹೆಚ್ಚಿನ ಸಾಮಥ್ರ್ಯ ತೋರಿದರೆ ಕೂಲಿಯ ಜೊತೆಗೆ ಉಚಿತಾರ್ಥ (ಬೋನಸ್) ಕೊಡಲಾಗುತ್ತದೆ. 

	4 ಕೆಲಸಗಾರನ ಸಾಮಥ್ರ್ಯವನ್ನು ದಿನದ ಕೆಲಸದ ಮೇಲಾಗಲಿ ಪ್ರತಿಯೊಂದು ಕಾರ್ಯದ ನಿರ್ವಹಣೆಯ ಮೇಲಾಗಲಿ ನಿರ್ಧರಿಸುವುದಿಲ್ಲ; ಒಂದು ವಾರ, ಪಕ್ಷ ಇಲ್ಲವೆ ತಿಂಗಳ ಅವಧಿಯು ಒಟ್ಟು ಕೆಲಸದ ಮೇಲೆ ಇದನ್ನು ನಿರ್ಧರಿಸಲಾಗುತ್ತದೆ. 

	5. ಸಾಮಥ್ರ್ಯ-ಉಚಿತಾರ್ಥ ಕೋಷ್ಟಕವನ್ನು ಮೊದಲಿಗೇ ತಯಾರಿಸಿ ಇಟ್ಟುಕೊಳ್ಳಲಾಗುವುದು. ಉದಾಹರಣೆ : 
ಸಾಮಥ್ರ್ಯ-ಉಚಿತಾರ್ಥ ಕೋಷ್ಟಕ

ಸಾಮಥ್ರ್ಯ
(%)

(1)
ಉಚಿತಾರ್ಥ ಕಾಲದ ಕೂಲಿಯ ಸೇಖಡಾ ಪ್ರಮಾಣ
(2)

ಸಾಮಥ್ರ್ಯ
(%)

(3)
ಉಚಿತಾರ್ಥಕಾಲದ ಕೂಲಿಯ ಶೇಕಡಾ ಪ್ರಮಾಣ
(4)

67
0.01

89
9.11

68
0.04

90
9.91

69
0.11

91
10.74

70
0.22

92
11.62

71
0.37

93
12.56

72
0.55

94
13.52

73
0.76

95
14.53

74
1.02

96
15.57

75
1.31

97
16.62

76
1.64

98
17.70

77
1.99

99
18.81

78
2.38

100
20.00

79
2.80

101
21.00

80
3.27

102
22.00

81
3.78

103
23.00

82
4.33

104
24.00

83
4.92

105
25.00

84
5.53

110
30.00

85
6.17

120
40.00

86
6.84

130
50.00

87
7.56

140
60.00

88
8.32

	ಒಂದು ಕಾರ್ಯನಿರ್ವಹಣೆಯನ್ನು 12 ಗಂಟೆಗಳಿಗೆ ಪ್ರಮಾಣಿತಗೊಳಿಸಿದ್ದು ಒಬ್ಬ ಕೆಲಸಗಾರ ಅದನ್ನು ನಿರ್ವಹಿಸಲು 12 ಗಂಟೆ ತೆಗೆದುಕೊಂಡರೆ ಅವನ ಸಾಮಥ್ರ್ಯ ಶೇಕಡಾ 50; 10 ಗಂಟೆ ತೆಗೆದುಕೊಂಡರೆ ಶೇ 120. 

	ಸಾಮಥ್ರ್ಯವನ್ನು ತಿಂಗಳ ಒಟ್ಟು ನಿರ್ವಹಣೆಯ ಮೇಲೆ ಲೆಕ್ಕ ಹಾಕುವದಿದ್ದು ಒಂದು ಗಂಟೆಗೆ 30 ಪೈ. ಕೂಲಿ ನಿಗದಿಯಾಗಿದೆಯೆಂದು ಭಾವಿಸಿಕೊಂಡು, ಒಬ್ಬ ಕೆಲಸಗಾರ ಒಂದು ತಿಂಗಳಲ್ಲಿ 240 ಗಂಟೆಗಳ ಕಾಲ ದುಡಿದು, ಅವನು ನಿರ್ವಹಿಸಿದ ಕಾರ್ಯಗಳು ನಿಗದಿಗೊಳಿಸಿದ ಪ್ರಮಾಣ ಮೇರೆಗೆ 210 ಗಂಟೆಗಳಲ್ಲಿ 
					 
ಮಾಡಬಹುದಾದವಾಗಿದ್ದರೆ ಅವನ ಸಾಮಥ್ರ್ಯ=87.5 ಆಗುತ್ತದೆ. ಅವನ ಕೂಲಿ 240ಘಿ30 ಪೈ=ರೂ. 
				 
72.00. ಇದರ ಜೊತೆಗೆ, ಉಚಿತಾರ್ಥ ಕೋಷ್ಟಕದ ಪ್ರಕಾರ ಆತ ಪಡೆಯುವ ಉಚಿತಾರ್ಥ ಅವನ ಕೂಲಿಯ 7.94% ಆಗುತ್ತದೆ. ಅಂದರೆ ಉಚಿತಾರ್ಥ ರೂ. 5.72. ಆದ್ದರಿಂದ ಅವನ ಗಳಿಕೆ ರೂ. (72.00+5.72)=ರೂ. 77.72 ಆಗುತ್ತದೆ. 

	ಶೇಕಡಾ 100 ಕ್ಕಿಂತ ಹೆಚ್ಚು ಸಾಮಥ್ರ್ಯ ತೋರಿದರೆ ಕೆಲಸಗಾರನಿಗೆ ಅವನು ಉಳಿಸಿದ ಕಾಲದ ಕೂಲಿ ಹಾಗೂ ಅವನು ಗಳಿಸಿದ ಕಾಲದ ಕೂಲಿಯ ಶೇಕಡಾ 120 ರಷ್ಟನ್ನು ಕೊಡಲಾಗುತ್ತದೆ. 

	ಎಮರ್ಸನ್ ಯೋಜನೆಯ ಪ್ರಕಾರ ಕೆಲಸಗಾರನ ಗಳಿಕೆಯನ್ನು ಕಂಡುಹಿಡಿಯಲು ಈ ಕೆಳಗಿನ ಸೂತ್ರಗಳು ನೆರವಾಗುತ್ತದೆ: 

66⅔% ರಿಂದ 100% ಸಾಮಥ್ರ್ಯದ ವರೆಗೆ :
ಇ=ಖಖಿ+ಏ (ಖಖಿ) 
100%ಕ್ಕಿಂತ ಹೆಚ್ಚಿನ ಸಾಮಥ್ರ್ಯ ತೋರಿದರೆ : 
ಇ=ಖಖಿ+(S-ಖಿ) ಖ+0.20 ಖಖಿ
ಅಥವಾ 
ಇ=Sಖ+0.20 ಖಖಿ
ಈ ಸೂತ್ರಗಳಲ್ಲಿ ಇ = ಗಳಿಕೆ
ಖ = ಕೂಲಿಯ ದರ (ಗಂಟೆಗೆ)
ಖಿ = ಕೆಲಸಮಾಡಿದ ಕಾಲ
ಏ = ಕೋಷ್ಟಕದಲ್ಲಿ ಸೂಚಿತವಾದ ಶೇಕಡಾ
S = ಪ್ರಮಾಣಿತ ಕಾಲಾವಧಿ

	ಎಲ್ಲ ಉಚಿತಾರ್ಥ ಯೋಜನೆಗಳಲ್ಲಿರುವಂತೆ ಅಧಿಕ ಉತ್ಪನ್ನದ ಫಲದಲ್ಲಿ ದೊಡ್ಡಪಾಲನ್ನು ಕೆಲಸಗಾರ ಪಡೆಯುವನಾದ್ದರಿಂದ ಉತ್ಪಾದನೆಯನ್ನು ದೊಡ್ಡ ಪರಿಮಾಣದಲ್ಲಿ ಕೈಗೊಂಡು ಪ್ರತಿ ಸರಕಿಗೆ ತಗಲುವ ವೆಚ್ಚವನ್ನು ಕಡಿಮೆಮಾಡಿಕೊಳ್ಳಬೇಕಾಗುತ್ತದೆ. ಪ್ರಮಾಣಿತ ಮಟ್ಟ ಅತಿ ದಕ್ಷ ಕೆಲಸಗಾರನಿಗೆ ಮಾತ್ರ ನಿಲುಕುವಂತೆ ಅದನ್ನು ನಿಗದಿಗೊಳಿಸಬೇಕಾಗುತ್ತದೆ. 

	ಎಮರ್ಸನ್ ಯೋಜನೆಯಲ್ಲಿ ಕೆಲವು ಅನುಕೂಲಗಳಿವೆ : ಉಚಿತಾರ್ಥ ಸಾಕಷ್ಟು ಮೊದಲಿಗೇ ಆರಂಭವಾಗುವುದರಿಂದ ಕೆಲಸಗಾರರಿಗೆ ಮಾನಸಿಕ ತೃಪ್ತಿ ಇರುತ್ತದೆ. ಮೊದಲಿಗೆ ಸಣ್ಣ ಪ್ರಮಾಣದ ಉಚಿತಾರ್ಥ ಕೊಡಲಾಗುವುದರಿಂದ ಉತ್ಪಾದನೆ ಒಮ್ಮೆಗೇ ಏರಿಬಿಡುವುದಿಲ್ಲ. ಪ್ರಮಾಣಿತಮಟ್ಟ ತಲುಪುತ್ತಿರುವಂತೆ, ಆ ಮಟ್ಟ ಮೀರಿದಂತೆ ಉಚಿತಾರ್ಥದ ಪ್ರಮಾಣ ಶೀಘ್ರವಾಗಿ ಏರುವುದರಿಂದ ಸಾಮಥ್ರ್ಯದ ಏರಿಕೆ ಕ್ರಮೇಣ ಕಂಡುಬರುತ್ತದೆ. ಟೇಲರನ ಯೋಜನೆಯಲ್ಲಿದ್ದಂತೆ ಸ್ವಲ್ಪದರಲ್ಲಿ ಉಚಿತಾರ್ಥವನ್ನು ಕಳೆದುಕೊಳ್ಳುವ ಭಯ ಇರುವುದಿಲ್ಲ. ಕೆಲಸಗಾರನ ಸಾಮಥ್ರ್ಯವನ್ನು ತಿಂಗಳ ಕಾರ್ಯನಿರ್ವಹಣೆಯ ಮೇಲೆ ಲೆಕ್ಕಹಾಕುವುದರಿಂದ ಕೆಲಸಗಾರನಿಗೆ ಸಂಚಿತ ಫಲ ದೊರೆಯುತ್ತದೆ. ಅವನ ಸಾಮಥ್ರ್ಯವನ್ನು ಒಂದು ಕಾರ್ಯ ನಿರ್ವಹಣೆಯ ಮೇಲೇ ಅಳೆಯದೆ ಹೀಗೆ ಮಾಡುವುದರಿಂದ ಕೆಲಸಗಾರ ಒಂದು ದಿನ ಕಳೆದುಕೊಂಡ ಸಾಮಥ್ರ್ಯವನ್ನು ಇನ್ನೊಂದು ದಿನ ಸರಿಪಡಿಸಿಕೊಳ್ಳಬಹುದು. ಕೆಲಸಗಾರ ಕೆಲವು ಕಾರ್ಯಗಳನ್ನು ಚೆನ್ನಾಗಿ ನಿರ್ವಹಿಸಿ ಉಳಿದವನ್ನು ಕಡೆಗಣಿಸುವಂತಿಲ್ಲ. ಕೆಲವು ಒಳ್ಳೆಯ ನಿರ್ವಹಣೆಗಳು ಹಲವು ಕಳಪೆ ನಿರ್ವಹಣೆಗಳೊಂದಿಗೆ ಸೇರಿ ಒಟ್ಟಿನಲ್ಲಿ ಉಚಿತಾರ್ಥವಿಲ್ಲದೆಯೇ ಹೋಗಬಹುದೆಂಬುದು ಅವನಿಗೆ ತಿಳಿದಿರುತ್ತದೆ. ಆದ್ದರಿಂದ ಆತ ಪ್ರತಿ ಕಾರ್ಯನಿರ್ವಹಣೆಯಲ್ಲೂ ಉಚಿತಾರ್ಥ ಗಳಿಸುವ ಪ್ರಯತ್ನ ಮಾಡುತ್ತಾನೆ. ಎಮರ್ಸನ್ ಯೋಜನೆಯಲ್ಲಿ ಕೆಲವು ಅನಾನುಕೂಲಗಳಿವೆ. 

	ಎಲ್ಲ ಉದ್ಯಮಗಳಲ್ಲೂ ಈ ವಿಧಾನವನ್ನು ಅನುಕರಿಸಲಾಗುವುದಿಲ್ಲ. ಕಾರ್ಯ ಮತ್ತು ಯಂತ್ರೋಪಕರಣಗಳ ಪ್ರಮಾಣೀಕರಣ ಸರಳವಾದದ್ದಲ್ಲ. ಶ್ರಮದ ಮೇಲಿನ ವೆಚ್ಚ ಹೆಚ್ಚಿನದಾಗುತ್ತದೆ. ಏಕೆಂದರೆ ಉಚಿತಾರ್ಥ 67%ರಷ್ಟು ಸಾಮಥ್ರ್ಯಕ್ಕೇ ಆರಂಭವಾಗುತ್ತದೆ. ಮೊದಲ ಹಂತಗಳಲ್ಲಿ ನೀಡುವ ಉಚಿತಾರ್ಥ ಕಡಿಮೆ ಪ್ರಮಾಣದ್ದಾದ್ದರಿಂದ ಸಾಕಷ್ಟು ಉತ್ತೇಜನ ದೊರೆಯದೆ ಇರಬಹುದು. ಯೋಜನೆಯ ನಿರ್ವಹಣೆ ಕಷ್ಟವಾಗುತ್ತದೆ. ಕೆಲಸಗಾರರಿಗೆ ಯೋಜನೆ ಅರ್ಥವಾಗುವುದಿಲ್ಲ. ಹೆಚ್ಚಿನ ಗುಮಾಸ್ತೆ ಕೆಲಸದ ಅಗತ್ಯ ಬೀಳುತ್ತದೆ.			 		 					
 (ಡಿ.ಎನ್.ಎಸ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ